ಮಂಗಳವಾರ, ಸೆಪ್ಟೆಂಬರ್ 13, 2016

   ಬೋನ್ ಸಾಯ್ - ಕುಂಡದಲ್ಲೊಂದು ಮರ


Image result for bonsai images


ಬೋಧೀ ವೃಕ್ಷ ಬೌದ್ಧರಿಗೆ ಆರಾಧ್ಯ. ಪ್ರವಾಸಗಳಲ್ಲಿ ಅನುಕೂಲವಾಗಲೆಂದು ಬೌದ್ಧ ಧರ್ಮ ಗುರುಗಳು ಬೋಧಿ ವೃಕ್ಷವನ್ನು ಕುಂಡದಲ್ಲಿ ಬೆಳೆಸುತಿದ್ದರು. ಇದು ಮಂದುವರೆದು ಚೀನಾದಲ್ಲಿ ಕುಂಡದಲ್ಲಿ ಬೆಳೆಸುವ ಹವ್ಯಾಸ ಬೆಳೆಯಿತು. ಹೀಗೆ ಪ್ರಾರಂಭವಾದ  ಹವ್ಯಾಸ ಮುಂದೆ ಬೆಳೆದಿದ್ದು ಜಪಾನಿನಲ್ಲಿ, ೧೩ನೇ ಶತಮಾನದಲ್ಲಿ ಉತ್ತುಂಗಕ್ಕೇರಿದ ಈ ಹವ್ಯಾಸ ಈಗ ವಿಶ್ವವ್ಯಾಪಿ.ಬೋನ್ ಸಾಯ್ ಉತ್ತಮ ಹವ್ಯಾಸ ಆತ್ಮಸಂತೋಷಕ್ಕೊಂದು ಸಾಧನ. ಪರಿಸರದ ಬಗ್ಗೆ ಒಲವು ಇರುವವರು, ಮರ ಗಿಡ ಬೆಳೆಸಲು ಜಾಗದ ಅಭಾವ ಇರುವವರು ತಮ್ಮ ಕ್ರಿಯಾಶೀಲತೆಗೆ ಸವಾಲು ಹಾಕಿ ಈ ಹವ್ಯಾಸ ಬೆಳೆಸಿಕೊಳ್ಳಬಹುದು.

ಬೋನ್ ಸಾಯ್ ಗಾಗಿ ಸಸ್ಯವರ್ಗ ಆಯ್ಕೆ


ಎಲ್ಲಾ ಗಿಡಗಳನ್ನೂ ಕುಂಡದಲ್ಲಿ ಬೆಳೆಸಬಹುದಾದರೂ ಕೆಲವು ನಿರ್ದಿಷ್ಟ ಜಾತಿಯ ಗಿಡಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅಯಾ ಪರಿಸರಕ್ಕೆ ಹೊಂದಿಕೊಳ್ಳುವ ಮರಗಳ ಸಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಎಲೆ, ಹೂ, ಹಣ್ಣುಗಳು ಚಿಕ್ಕದಾಗಿರುವ ಗಿಡಗಳನ್ನೇ ಬೆಳೆಸಿದರೆ ನೋಡುಗರಿಗೆ ಅತ್ಯಾಕರ್ಷಕ ವಾಗಿ ಕಾಣುತ್ತದೆ.

ಪ್ರಚಲಿತದಲ್ಲಿರುವ ಶೈಲಿಗಳು


೧) ಸಾಂಪ್ರದಾಯಿಕ ನೇರ ಶೈಲಿ : 
Image result for images of bonsai styles
ಈ ರೀತಿಯ ಬೋನ್ ಸಾಯಗಳು ನೇರವಾದ ಚೂಪಾಗುತ್ತಿರುವ ಕಾಂಡವನ್ನು ಹೊಂದಿರುತ್ತದೆ. ವೇಲಿನ ಭಾಗ ಸಾಂದ್ರವಾಗಿ, ಮೇಲ್ಮುಖವಾದ ಟೊಂಗೆಗಳನ್ನು ಹೊಂದಿರುತ್ತದೆ. ಇವನ್ನು ಅಂಡಾಕಾರದ ಅಥವಾ ಚತುಭು೯ಜಾಕಾರದ ಬಟ್ಟಲುಗಳಲ್ಲಿ ಬೆಳೆಸುವುದು ಸಾಮಾನ್ಯ.

 ೨). ಅಸಾಂಪ್ರದಾಯಿಕ ನೇರ ಶೈಲಿ: 



http://shop.brusselsbonsai.com/images/informalUpright200x192.gif

೩) ಬಾಗಿದ ಶೈಲಿ: 

Image result for images of bonsai styles

ಈ ಪ್ರಕಾರದಲ್ಲಿ ಬುಡದಿಂದಲೇ ಒಂದು ದಿಕ್ಕಿಗೆ ವಾಲಿದ ಗಿಡ ಹಾಗೇ ಮಂದುವರೆದಿರುತ್ತದೆ. ಈ ಮಾದರಿ ಬೆಳಕಿನ ಅಭಾವದಿಂದ ಉಂಟಾದ ಬಾಗುವಿಕೆಯನ್ನು ಹೋಲುತ್ತದೆ. 


೪). ಗಾಳಿ ಬೀಸಿದಂತಿರುವ ಶೈಲಿ : 
Image result for images of bonsai styles

ಹೆಸರೇ ಹೇಳುವಂತೆ ಈ ಶೈಲಿಯಲ್ಲಿ ಬೆಳೆಸಿದ ಮರ ಬಿರುಗಾಳಿ ಬೀಸುತ್ತಿರುವುದನ್ನು ಚಿತ್ರಿಸುತ್ತದೆ. ಗಾಳಿ ಬಂದಾಗ ಒಂದೆಡೆ ವಾಲಿದ ಮರದಂತಿರುತ್ತದೆ. ಒಂದೆ ಕಡೆ ಟೊಂಗೆ ಇದ್ದು ಅದರ ವಿರುದ್ದ ದಿಕ್ಕಿನಲ್ಲಿ ಮರ ಬಾಗಿದ್ದರೆ ಇನ್ನಷ್ಟು ನೈಸರ್ಗಿಕ ವಾಗಿರುತ್ತದೆ.



೫) ಅಧ೯ ಮತ್ತು ಪೂರ್ಣ ಜಲಪಾತ ಶೈಲಿ : 


Image result for images of cascade bonsai styles Image result for images of cascade bonsai styles


ಸಾಮಾನ್ಯವಾಗಿ ಎತ್ತರದ ಕುಂಡಗಳಲ್ಲಿ ಬೆಳೆಸುವ ಈ ಶೈಲಿಯ ಗಿಡಗಳು ಧಾರಕದ ಪಕ್ಕಕ್ಕೆ ವಾಲಿ ಕೆಳಗಿಳಿದಿರುತ್ತದೆ. ಇದು ಪ್ರಪಾತದ ಅಂಚಿನಲ್ಲಿ ಜೋಲುತ್ತಿರುವ ಗಿಡಗಳನ್ನು ಹೋಲುತ್ತದೆ.

೬) ಗುಚ್ಛ ಮಾದರಿ : 

https://adamaskwhy.files.wordpress.com/2014/08/img_6228.jpg


ಈ ಮಾದರಿಯಲ್ಲಿ ಬೆಳೆಸಿದ ಗಿಡಗಳ ೧/೨ ಗಿಂತ ಹೆಚ್ಚು ಕಾಂಡದ ಭಾಗ ಬೋಳಾಗಿರುತ್ತದೆ. ಮೇಲ್ಸರಿದಂತೆ ಒಮ್ಮೆಲೇ ಅನೇಕ ಟೊಂಗೆಗಳು ಮೇಲ್ಮುಖವಾಗಿ ಬೆಳೆದಿರುತ್ತದೆ.


ಈ ಮೇಲಿನ ಶೈಲಿಗಳ ಜೊತೆಗೆ ಕಡ್ಡಿ ಬೋನ್ ಸಾಯ್, ಕುಬ್ಜಗಳು, ಕಾಂಡದಲ್ಲಿ ಬಿರುಕು ಪ್ರಚಲಿತದಲ್ಲಿರುವ ಇನ್ನಿತರ ಶೈಲಿಗಳಾಗಿವೆ.


ಆಕಾರ ಕೊಡುವುದು



ಗಿಡವನ್ನು ಬೆಳೆಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗಿಡಕ್ಕೆ ಆಕಾರ ಕೊಡುವುದು. ಯಾವ ರೀತಿ ಆಕಾರ ಕೊಡಲಾಗಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಮೊದಲ ಬೆಳವಣಿಗೆ ಯಿಂದಲೇ ಕೆಲವು ಗಿಡಗಳು ತಮ್ಮ ಶೈಲಿಯನ್ನು ವ್ಯಕ್ತಪಡಿಸಿಬಿಡುತ್ತವೆ. ಅವನ್ನೇ ಮುಂದುವರೆಸಿ ಗಿಡಕ್ಕೆ ಇನ್ನೂ ಹೆಚ್ಚಿನ ಮೆರಗು ಕೊಡಲು ತಂತಿ ಸುತ್ತುವುದು, ಭಾರ ಕಟ್ಟುವುದು, ಎಳೆದು ಕಟ್ಟುವ ಕ್ರಿಯೆಗಳನ್ನು ಮಾಡಿ ಉತ್ತಮ ಮೌಲ್ಯದ ಬೋನ್ ಸಾಯ್ ನಿರ್ಮಾಣ ಸಾದ್ಯ. ಗಿಡ ತನಗೆ ಬೇಕಾದಂತೆ ಬೆಳೆಯುತ್ತದೆ. ಅದನ್ನು ನಿಯಂತ್ರಿಸಿ ನಮಗೆ ಬೇಕಾದಂತೆ ಬೆಳೆಸಲು ಚಾಟನಿ/ಸವರುವುದು ಮತ್ತು ವ್ಯವಸ್ತಿತಗೊಳಿಸುವುದು ಅತ್ಯಗತ್ಯ.


ಬೋನ್ ಸಾಯ್ ಕೇವಲ ಪುಸ್ತಕಗಳನ್ನು ಓದಿ ಕರಗತಗೊಳಿಸಿಕೊಳ್ಳುವ ಕಲೆಯಲ್ಲ. ಇದಕ್ಕೆ ಪ್ರಕೃತಿಯನ್ನು ವಿಶ್ಲೇಷಿಸುವ ಕಣ್ಣು ಮುಖ್ಯ. ಬೇರೆ ಬೇರೆ ಬೋನ್ ಸಾಯ್ ಗಳನ್ನು ನೋಡಿ, ತಾವೇ ಬೆಳೆದು ಈ ಕಲೆಯನ್ನು ಕರಗತಗೊಳಿಸಿಕೊಳ್ಳಬಹುದು. ದೊಡ್ಡ ಹೆಮ್ಮರವಾಗಿ ಬೆಳೆಯಬೇಕಿದ್ದ ಗಿಡವನ್ನು ಚಿಕ್ಕದಾಗಿ ಬೆಳೆಸುವುದೇ ಒಂದು ಅದ್ಬುತ. ಅದ್ಭುತವಾದ ಅದ್ಬುತವನ್ನು ನಿರ್ಮಿಸಲು ಕುಶಲತೆ ರೂಡಿಸಿಕೊಳ್ಳಬೇಕು. ಅದ್ದರಿಂದ ಇಂದೇ ಒಂದು ಬೋನ್ ಸಾಯ್ ಬೆಳೆಸಲು ಪಣತೊಡಿ.

ವಿ.ಸೂ.
೧.ಗೂಗಲ್ ನಲ್ಲಿ ಆಯ್ದುಕೊಂಡ ಚಿತ್ರ ಗಳನ್ನು ಉಪಯೋಗಿಸಿಕೊಳ್ಳಲಾಗಿದೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ